Loading...

ಅಲ್ಪಸಂಖ್ಯಾತರ ಯೋಜನೆಗಳು

ಅಲ್ಪಸಂಖ್ಯಾತರ ಯೋಜನೆಗಳು

ವಿವರಗಳು

ಯೋಜನೆಯ ಹೆಸರು:
‘ಶ್ರಮ ಶಕ್ತಿ' ಯೋಜನೆ (2021-22 ನೇ ಸಾಲಿಗೆ ಮಾತ್ರ)
ವಿವರಣೆ:

ಈ ಯೋಜನೆಯಡಿಯಲ್ಲಿ ಅಲ್ಪಸಂಖ್ಯಾತ ವರ್ಗದ ಕುಲಕಸುಬುದಾರರಿಗೆ ತರಬೇತಿ ನೀಡಿ, ಅವರು ತಮ್ಮ ಕಲಾತ್ಮಕ ಮತ್ತು ತಾಂತ್ರಿಕ ಕೌಶಲ್ಯವನ್ನು ವೃದ್ಧಿಸಿಕೊಂಡು ಅದೇ ಕಸುಬನ್ನು ಮುಂದುವರೆಸಲು ಅಥವಾ ಸಣ್ಣ ವ್ಯಾಪಾರವನ್ನು ಪ್ರಾರಂಭಿಸಲು ಅಥವಾ ಅಭಿವೃದ್ಧಿಗೊಳಿಸುವ ಸಲುವಾಗಿ, ನಿಗಮದಿಂದ ಕಡಿಮೆ ಬಡ್ಡಿದರದಲ್ಲಿ ರೂ.50,000/-ದವರೆಗೆ ಸಾಲಸೌಲಭ್ಯವನ್ನು ಕಲ್ಪಿಸಲಾಗುತ್ತದೆ. ಇದರಲ್ಲಿ, ಶೇ.50ರಷ್ಟ್ಟು ಸಾಲವನ್ನು 36 ತಿಂಗಳಿನಲ್ಲಿ ಫಲಾನುಭವಿಯು ಮರುಪಾವತಿ ಮಾಡಿದಲ್ಲಿ, ಉಳಿದ ಶೇ.50ರಷ್ಟ್ಟು ಹಣವನ್ನು ‘ಬ್ಯಾಕ್‌ಎಂಡ್ ಸಹಾಯಧನ’ವನ್ನಾಗಿ ಪರಿಗಣಿಸಲಾಗುತ್ತದೆ.ಫಲಾನುಭವಿಯು ತಾನು ಪಡೆದ ಸಾಲವನ್ನು 36 ತಿಂಗಳೊಳಗಾಗಿ ಮರುಪಾವತಿ ಮಾಡಲು ವಿಫಲನಾದಲ್ಲಿ, ಶೇ.50ರಷ್ಟ್ಟು ಬ್ಯಾಕ್‌ಎಂಡ್ ಸಹಾಯಧನವನ್ನು ಸಹ ಸಾಲವೆಂದು ಪರಿಗಣಿಸಲಾಗುತ್ತದೆ. ಅರ್ಜಿ ಸಲ್ಲಿಸಲು ವಯೋಮಿತಿ 18 ರಿಂದ 45 ವರ್ಷ, ಬಡ್ಡಿ ದರ 4%, ಆದಾಯ ಮಿತಿ 4.5 ಲಕ್ಷ


ಅರ್ಹತೆ:

ದಾಖಲಾತಿಗಳು :

  1. ಯೋಜನಾ ವರದಿ
  2. ಜಾತಿ ಪ್ರಮಾಣ ಪತ್ರ
  3. ಆದಾಯ ಪ್ರಮಾಣ ಪತ
  4. ಆಧಾರ್ ಕಾರ್ಡ್ ಪ್ರತಿ
  5. ಬ್ಯಾಂಕ್ ಪಾಸ್ ಬುಕ್ ಪ್ರತಿ
  6. ಸ್ವಯಂ ಘೋಷಣಾ ಪತ್ರ
  7. ಜಾಮೀನುದಾರರ ಸ್ವಯಂ ಘೋಷಣಾ ಪತ್ರ.

ಸ್ಥಿತಿ:
Inactive