Loading...

ಅಲ್ಪಸಂಖ್ಯಾತರ ಯೋಜನೆಗಳು

ಅಲ್ಪಸಂಖ್ಯಾತರ ಯೋಜನೆಗಳು

ವಿವರಗಳು

ಯೋಜನೆಯ ಹೆಸರು:
ವ್ಯಾಪಾರ/ಉದ್ಯಮಗಳಿಗೆ ನೇರ ಸಾಲ ಯೋಜನೆ
ವಿವರಣೆ:

ಈ ಯೋಜನೆಯಡಿಯಲ್ಲಿ ವ್ಯಾಪಾರ/ಉದ್ದಿಮೆ ಚಟುವಟಿಕೆ ಕೈಗೊಳ್ಳಲು ಬಯಸುವ ಫಲಾನುಭವಿಗಳಿಗೆ ಆಸ್ತಿಯ (ಕಟ್ಟಡ/ಭೂಮಿ) ಅಡಮಾನದ ಮೇಲೆ ಸಾಲವನ್ನು ಒದಗಿಸಲಾಗುವುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 15-Nov-2022


ಅರ್ಹತೆ:
  1. ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು
  2. ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿರಬೇಕು
  3. ಅರ್ಜಿದಾರರ ವಯಸ್ಸು 18 ರಿಂದ 55 ವರ್ಷದೊಳಗಿರಬೇಕು
  4. ಅರ್ಜಿದಾರರು ಕೆ.ಎಂ.ಡಿ.ಸಿ. ಗೆ ಸುಸ್ತಿದಾರರಾಗಿರಬಾರದು.
  5. ನಿಗಮಕ್ಕೆ ಆಸ್ತಿಯ (ಕಟ್ಟಡ/ಭೂಮಿ) ಅಡಮಾನದ ಮೇಲೆ ಮಾತ್ರ ಸಾಲವನ್ನು ಒದಗಿಸಲಾಗುತ್ತದೆ. ಆಸ್ತಿಯ ಮೌಲ್ಯವು ಸಾಲದ ಮೊತ್ತಕ್ಕಿಂತ ಕಡಿಮೆಯಿರಬಾರದು
  6. ವ್ಯಾಪಾರ ಉದ್ದಿಮೆ ಸಾಲವನ್ನು ಕುಟುಂಬದ ಒಬ್ಬ ಸದಸ್ಯರಿಗೆ ಮಾತ್ರ ನೀಡಲಾಗುವುದು.
  7. ಕುಟುಂಬದ ವಾರ್ಷಿಕ ಆದಾಯ ರೂ 8.00 ಲಕ್ಷಗಳಿಗಿಂತ ಕಡಿಮೆ ಇರುವ ಅರ್ಜಿದಾರರಿಗೆ ರೂ 20.00 ಲಕ್ಷವರೆಗೆ ಶೇ 4 ಬಡ್ಡಿ ದರದಲ್ಲಿ ಸಾಲ ನೀಡಲಾಗುವುದು
  8. ಕುಟುಂಬದ ವಾರ್ಷಿಕ ಆದಾಯ ರೂ 8.00 ದಿಂದ 15.00 ಲಕ್ಷವರೆಗೆ ಇರುವ ಅರ್ಜಿದಾರರಿಗೆ ರೂ 20.00 ಲಕ್ಷವರೆಗೆ ಶೇ 6 ಬಡ್ಡಿ ದರದಲ್ಲಿ ಸಾಲ ನೀಡಲಾಗುವುದು

ಸ್ಥಿತಿ:
Active
Link:
https://kmdconline.karnataka.gov.in/Portal/home